ಅನ್ವಿತಾ ಸಾಗರ್ ಅಲಿಯಾಸ್ ಪಾರ್ವತಿ(ಜನನ:20 ಫೆಬ್ರವರಿ 1992) ಇವರು ಭಾರತೀಯ ದೂರದರ್ಶನ ನಟಿ ಹಾಗೂ ಮಾಡೆಲ್.ಇವರು ಕನ್ನಡ ಮತ್ತು ತುಳು ಸಿನಿಮಾದಲ್ಲಿ ನಟಿಸಿದ್ದಾರೆ.ಇವರು ತುಳುಚಿತ್ರರಂಗ ನಟ ಅನೂಪ್ ಸಾಗರ್ ರವರ ತಂಗಿ.ಕನ್ನಡ ಸಿನಿಮಾಗಳಾದ ಬಣ್ಣ ಬಣ್ಣದ ಬದುಕು , ಸ್ನೇಹಚಕ್ರ , ಮಾಯಾಕನ್ನಡಿ , ಜೀವನ ಯಜ್ಞ ಹಾಗೂ ತುಳು ಸಿನಿಮಾಗಳಾದ ದಂಡ್ , ಪೆಟ್ಕಮ್ಮಿ, ಬಲೆ ಪುದರ್ ದೀಕ ಈ ಪ್ರೀತಿಗ್ ಎಂಬ ಸಿನಿಮಾಗಳಲ್ಲಿ ಪಾತ್ರವಹಿಸಿ ನಟಿಸಿದ್ದಾರೆ. ಪ್ರಸ್ತುತವಾಗಿ ಇವರು ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಣ್ಣ ತಂಗಿ' ಎಂಬ ಧಾರವಾಹಿಯಲ್ಲಿ 'ಜ್ಯೋತಿ' ಎಂಬ ಪಾತ್ರದಲ್ಲಿ; ಜೀ ಕನ್ನಡ ದಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಎಂಬ ಧಾರವಾಹಿಯಲ್ಲಿ 'ಆಧ್ಯಾ' ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. == ಜನನ , ಆರಂಭಿಕ ಜೀವನ ಮತ್ತು ಶಿಕ್ಷಣ == ಅನ್ವಿತಾ ಇವರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ 20 ಫೆಬ್ರವರಿ 1992 ರಂದು ಜನಿಸಿದರು. ಇವರ ತಂದೆ ಹೇಮಚಂದ್ರ(ಉದ್ಯಮಿ), ತಾಯಿ ಭಾರತಿ(ಗೃಹಣಿ), ಅಣ್ಣ ಅನೂಪ್ ಸಾಗರ್ ತುಳುಚಿತ್ರರಂಗ ನಟ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಜೋಸೆಫ್ ಹೈಯರ್ ಪ್ರೈಮರಿ ಇಂಗ್ಲಿಷ್ ಸ್ಕೂಲ್ ಹಾಗೂ ಪ್ರೌಢ ಶಿಕ್ಷಣವನ್ನು ನಿರ್ಮಲಾ ಗರ್ಲ್ಸ್ ಹೈಸ್ಕೂಲ್ , ಸಾಗರದಲ್ಲಿ ಪಡೆದರು.ನಂತರ ಮಂಗಳೂರಿನ ಶಾರದಾ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆದು, ಬಿ.ಬಿ.ಎ ಪದವಿ ಮತ್ತು ಎಂ.ಬಿ.ಎ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಮಂಗಳೂರಿನ ಎಸ್.ಡಿ.ಎಂ ಕಾಲೇಜಿನಲ್ಲಿ ಪುರ್ಣಗೊಳಿಸಿದರು. == ವೃತ್ತಿಜೀವನ == ಬಿ.ಬಿ.ಎ ಪದವಿ ಶಿಕ್ಷಣವನ್ನು ಪಡೆದ ನಂತೆ ಸುಮಾರು ನಾಲ್ಕು ವರುಷಗಳ ಕಾಲ ಅನ್ವಿತಾರವರು ನಮ್ಮ ಟಿ.ವಿ ಚಾನಲ್ ನಲ್ಲಿ ಮಂಗಳೂರಿನಲ್ಲಿರುವ ತನಕ ನಿರೂಪಕಿಯಾಗಿ ಕೆಲಸ ಮಾಡಿದರು. ನಂತರ ೨೦೧೫ ರಲ್ಲಿ ಇವರು ರಂಜಿತ್ ಬಜ್ಪೆ ನಿರ್ದೇಶನದ ದಂಡ್ ತುಳುಚಿತ್ರದ ಮೂಲಕ ಸಿನಿಮಾ ಲೋಕಕ್ಕೆ ಪಾದಾರ್ಪಿಸಿದರು.ಇದರ ನಂತರ ಹಲವಾರು ತುಳು ಮತ್ತು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಇವರು ಜೀ ಕನ್ನಡ ದಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಎಂಬ ಧಾರವಾಹಿಯಲ್ಲಿ ಆಧ್ಯಾ ಎಂಬ ಪಾತ್ರವನ್ನು ವಹಿಸಿ ನಟಿಸುತ್ತಿದ್ದಾರೆ . == ಅಭಿನಯಿಸಿದ ಚಿತ್ರಗಳ ಪಟ್ಟಿ == === ಕನ್ನಡ ಸಿನಿಮಾಗಳು === ೩ === ಅಭಿನಯಿಸಿದ ತುಳು ಸಿನಿಮಾಗಳು === == ಉಲ್ಲೇಖನಗಳು ==